ಹಾವೇರಿ ಜಿಲ್ಲೆಯಲ್ಲಿ ಮಳೆ ತಗ್ಗಿದ್ರೂ ಅವಾಂತರ ಕಡಿಮೆ ಆಗ್ತಿಲ್ಲ. ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದ ಕೆರೆ ತುಂಬಿ ರೈತರ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸುಮಾರು ೪೦೦ ಎಕರೆ ಪ್ರದೇಶದಲ್ಲಿ ವಿಶಾಲವಾದ ಕೆರೆ ಇದಾಗಿದ್ದು, ಕೆರೆ ತುಂಬಿ ಹರಿದಿದ್ದರಿಂದ ಕೆರೆ ಅಕ್ಕಪಕ್ಕದ ೩೦೦ ಎಕರೆಗೂ ಅಧಿಕ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಜಲಾವೃತಗೊಂಡಿವೆ. ಹತ್ತಿ, ಶೇಂಗಾ, ಮೆಕ್ಕೆಜೋಳದ ಬೆಳೆ ನೀರಲ್ಲಿ ನಿಂತು ಸಂಪೂರ್ಣ ಹಾಳಾಗಿವೆ. ಬೆಳೆಗಳು ನೀರಲ್ಲಿ ನಿಂತು ಕೊಳೆತು ಹಾಳಾಗ್ತಿರೋದನ್ನ ಕಂಡು ಅನ್ನದಾತರು ಕಂಗಾಲಾಗಿದ್ದಾರೆ.
#publictv #haveri #raineffect